ಕನ್ನಡಿಗ ಕನ್ನಡ ಕರ್ನಾಟಕ

I-Dont-Know

ಇಂದು ಬೆಂಗಳೂರಿನಲ್ಲಿ “I Don’t Know ಕನ್ನಡ್ ” ಅನ್ನೊ ಡೈಲಾಗ್ ಮಾಮೂಲಿಯಾಗಿದೆ ಇದಕ್ಕೆ ಕಾರಣ ನಾವುಗಳೇ!! ಕರ್ನಾಟಕಕ್ಕೆ ಬಂದು ನೆಲಸಿರಿರುವ ವಲಸಿಗರ ಜೊತೆ ಹಿಂದಿ, ತಮಿಳಿನಲ್ಲಿ ಅವರಂತೆಯೇ ಮಾತನಾಡುತ್ತ ನಮ್ಮ ನಡೆ-ನುಡಿ ಮರೆತಿದ್ದೇವೆ. ಅದಕ್ಕೆ ಸಮನಾಗಿ ಉತ್ತರಭಾರತದವರು ಇಲ್ಲಿ ಬಂದು ತಮ್ಮ ಆಹಾರ ಹುಟ್ಟಿಸಿಕೊಳ್ಳುತ್ತಿರುವುದಲ್ಲದೇ, ಸಾಮಜಿಕ ಜಾಲತಾಣಗಳಲ್ಲಿ ಕನ್ನಡಿಗರಿಗೆ ನಿಂದಿಸುತ್ತಿರುವುದು ವಿಷಾದನೀಯ ಕನ್ನಡಿಗರಾಗಿ ನಾವು ಎಚ್ಚೆತ್ತುಕೊಳ್ಳದೇ ಇದ್ದಲ್ಲಿ ನಮ್ಮ ವಿನಾಶ ಖಂಡಿತ! ನಮ್ಮನ್ನಾಳುವ ನಾಯಕರು ಕನ್ನಡ ಕನ್ನಡಿಗ ಕರ್ನಾಟಕ ಎಂದು ನೋಡದೆ ತಮ್ಮ ಸ್ವಾರ್ಥಕ್ಕೆ ಆಡಳಿತ ನಡೆಸುತ್ತಿರುವುದು ಬೇಸರದ ಸಂಗತಿ. ಇದರ ಮಧ್ಯೆ ಕನ್ನಡ ಕರ್ನಾಟಕ ರಕ್ಷಣೆ ಮಾಡುವ ಸಂಘ ಸಂಸ್ಥೆಗಳಿಗೆನೂ ಕೊರತೆಯಿಲ್ಲ ಒಂದೊಂದು ಸಂಘಗಳಲ್ಲೂ ಎರಡು,ಮೂರು ಬಣಗಳು! ಹೀಗೆ ಬಣಗಳಾಗಿ ಕನ್ನಡ ಕಾಪಡುವುದು ಬಿಟ್ಟು ಒಟ್ಟಾಗಿ ದುಡಿದಲ್ಲಿ ಕನ್ನಡ ಕರ್ನಾಟಕದ ಏಳ್ಗೆ ಖಂಡಿತ! ಕನ್ನಡವು ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಒಂದು ದ್ರಾವಿಡ ಭಾಷೆಯಾಗಿದೆ. ಇದನ್ನು ಅರಿಯದ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪಕ್ಷಗಳು ಹಿಂದಿ ಹೇರಿಕೆ ಮಾಡುತ್ತಿರುವುದು ಖಂಡನೀಯ!!

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

Karnataka Government Logo

Karnataka Government Logo

ಕನ್ನಡ” ಕರ್ನಾಟಕದ ಆಡಳಿತ ಭಾಷೆ. ಗಂಡಬೇರುಂಡ ನಮ್ಮ ರಾಜ್ಯದ ಲಾಂಛನ 8 ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆಯ ಭಾಷೆ ನಮ್ಮ ಕನ್ನಡ ಅಂದಿನ ಕವಿ ಪಂಪ, ರನ್ನರಿಂದ ಇಂದಿನ ಕಾರ್ನಡ, ಕಂಬಾರರವರೆಗೆ ಕನ್ನಡ ಸಾಹಿತ್ಯ ತನ್ನದೇ ಆದ ಛಾಪು ಮೂಡಿಸಿದೆ. ಕರ್ನಾಟಕದಲ್ಲಿ ರಂಗು ರಂಗಿನ ಜನಪದ ಕಲೆಗಳಿಗೆನೂ ಬರವಿಲ್ಲ!! ಡೊಳ್ಳು ಕುಣಿತ, ಯಕ್ಷಗಾನ, ವೀರಗಾಸೆ ಹೀಗೆ ಮುಂತಾದವು. ಕನ್ನಡ ಚಿತ್ರರಂಗವು ಬಹಳ ದೊಡ್ಡದಾಗಿ ಬೆಳೆದು ವರ್ಷಕ್ಕೆ 100+ ಚಿತ್ರಗಳನ್ನು ಜಗತ್ತಿಗೆ ನೀಡುತ್ತಿದೆ. ಇಷ್ಟೇಲ್ಲ ಖ್ಯಾತಿ ಹೊಂದಿರುವ ನಮ್ಮ ನಾಡಿನಲ್ಲಿ ಬಂದು ತಂಗುವ ಉತ್ತರಭಾರತದವರಿಗೆ ಬೆಂಗಳೂರೇ ಬೇರೆ ಕರ್ನಾಟಕವೇ ಬೇರೆ ಎಂಬ ಹುಚ್ಚು ಕಲ್ಪನೆ! ಅದಕ್ಕೆ ಕಾರಣ ನಾವು ಅವರೊಂದಿಗೆ ವ್ಯವರಿಸುವಾಗ ಬಳಸುವ ಭಾಷೆ! ಹಾಗಾಗಿ ದಯವಿಟ್ಟು ಬೇರೆ ರಾಜ್ಯದವರ ಜೊತೆಗೆ ಕನ್ನಡವನ್ನೆ ಮಾತಾಡಿ ಕನ್ನಡ ಬೆಳಸಿ ಕನ್ನಡ ಉಳಿಸಿ! ಕನ್ನಡ ಕಲಿಸ ಹೊರಟ ನಮ್ಮನ್ನು ಬೆಂಬಲಿಸಿ! ಕರ್ನಾಟಕದಲ್ಲಿ ನಾವಿದ್ರೇ ಸಾಲ್ದು ನಮ್ಮೊಳಗೆ ಕನ್ನಡವಿರಬೇಕು!

– Gurupratik H

[/fusion_builder_column][/fusion_builder_row][/fusion_builder_container]