ನನ್ನ ಅಂಕಣ : ಜಗದಂಕಣ

‘ಎಂಟು ದಿಕ್ಕಿನಿಂದ ಭಾರತದ ಮೇಲೆ ದಾಳಿ ಮಾಡುತ್ತಿದ್ದಾಗ  ಎದ್ದು ನಿಂತ ಧೀರ ಶಿವಾಜಿ….’

ಶಿವಾಜಿ ಎನ್ನುವಾಗಲೇ ಮೈಯಲ್ಲೆಲ್ಲಾ ದೇಶ ಭಕ್ತಿಯ ರಕ್ತವೇ ಹರಿಯಲು ಪ್ರಾರಂಭಿಸುತ್ತದೆ…
ಅಂತಿಂತ ವ್ಯಕ್ತಿಯಲ್ಲ… ಈ ಶಿವಾಜಿ..!!!. ದಾಳಿ ಮಾಡುತ್ತಿದ್ದ ಎಲ್ಲಾ ರಾಜರುಗಳನ್ನು ಬೆವರಿಳಿದ ಮಹಾರಾಷ್ಟ್ರದ ಮರಾಠ ದೊರೆ…. ಶಿವಾಜಿ ಎಂದೊಡನೆ ಉತ್ತರದಿಂದ ದಕ್ಷಿಣ ಎಲ್ಲಾ ವಿದೇಶಿ ದಾಳಿಕೋರ ರಾಜರುಗಳು  ಮಾತ್ರ ಯುದ್ಧಕ್ಕೆ ಭಯಭೀತರಾಗುತ್ತಿದ್ದರು.

ಎಷ್ಟೇ ಪ್ರಯತ್ನಿಸಿದರೂ ಶಕ್ತಿಯಿಂದ ಸೋಲಿಸಲು ಸಾಧ್ಯವೇ ಇಲ್ಲ ಈ ಶಿವಾಜಿಯನ್ನು… ಅಷ್ಟೊಂದು ಬಲಶಾಲಿಯಾಗಿತ್ತು ಶಿವಾಜಿಯ ಸೈನ್ಯ…
ಶಕ್ತಿಯುಕ್ತಿ ಎರಡರಲ್ಲೂ ಶಿವಾಜಿಯೇ ಒಂದು ಕೈ ಮೇಲೆ ಎನ್ನಬಹುದು…
ಬಿಜಾಪುರದ ಎಲ್ಲಾ ದೇವಾಲಯವನ್ನೆಲ್ಲಾ ಹಾಳು ಮಾಡಿ ಕೊಳ್ಳೆಹೊಡೆದು ಮುಗಿದಾದ ನಂತರ ಅಫ್ಜಲ್ ಖಾನ್ ನಿಗೆ  ಕಂಡದ್ದು ಶಿವಾಜಿಯ ರಾಜ್ಯ… ಶಿವಾಜಿಯ ಪರಾಕ್ರಮವನ್ನು ಮೊದಲೇ ಅರಿತಿದ್ದ ಅಫ್ಜಲ್ ಖಾನ್ ಯುದ್ಧ ಮಾಡಿ ಶಿವಾಜಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದು ಉಪಾಯವೊಂದನ್ನು ಹೊಡಿದ… ಸಂಧಾನಕ್ಕೆ ಕರೆದು ಶಿವಾಜಿಯನ್ನು ಕೊಲ್ಲಲು ಯೋಜನೆ ರೂಪಿಸಿ… ಶಿವಾಜಿಯನ್ನು ಆಹ್ವಾನಿಸಿ ಪತ್ರವನ್ನು ಬರೆದನು…
ಪತ್ರ ಓದಿದ ತಕ್ಷಣ ಶಿವಾಜಿ ಅವನ ಕುತಂತ್ರವನ್ನು ಅರಿತು ತಂತ್ರವೊಂದನ್ನು ಮಾಡಿ ಸಂಧಾನಕ್ಕೆ ಒಪ್ಪಿ ಮರು ಪತ್ರವನ್ನು ಬರೆದು ಕಳುಹಿಸಿಕೊಟ್ಟನು..
ಮರು ಪತ್ರವನ್ನು ನೋಡಿ ಅಫ್ಜಲ್ ಖಾನ್ ನ ಮನದಲ್ಲಿ ಖುಷಿಯೋ ಖುಷಿ… !!!
‘ತುಪ್ಪ ಜಾರಿ ಬಿಸಿ ಬಾಣಲೆಗೆ ಬಿತ್ತು.’ ಎಂದುಕೊಂಡನು..
ಸಂಧಾನದ ದಿನವು ಬಂದೇ ಬಿಟ್ಟಿತು…
ಇಬ್ಬರೂ ತಮಗೆ ಬೇಕಾದಂತಹ ವ್ಯವಸ್ಥೆಯನ್ನು ಮಾಡಿಕೊಂಡು ಭೇಟಿಯಾದರು.
ಶಿವಾಜಿಯು ಅಫ್ಜಲ್ ಖಾನ್ ನ ಹತ್ತಿರ ಬರುತ್ತಿದ್ದಂತೆ ಅಪ್ಪಿಕೊಳ್ಳಲು ಮುಂದಾದ .
ಶಿವಾಜಿ ಮತ್ತು ಅಫ್ಜಲ್ ಖಾನ್ ಇಬ್ಬರಿಗೂ ಹೋಲಿಸಿದರೆ ಅಫ್ಜಲ್ ಖಾನ್ ನದ್ದು ದೈತ್ಯ ದೇಹ ಆದರೆ ಶಿವಾಜಿಯದ್ದು ಸಾಮಾನ್ಯವಾದ ,ಹೆಚ್ಚು ಎತ್ತರವಿಲ್ಲದ ದೇಹ. ಶಿವಾಜಿಯನ್ನು ಅಪ್ಪಿಕೊಂಡ ತಕ್ಷಣ ಅಫ್ಜಲ್ ಖಾನ್  ಬೆನ್ನಿಗೆ ತನ್ನ ಸಣ್ಣ ಚಾಕುವಿನಿಂದ ಇರಿಯುವ ಪ್ರಯತ್ನ ಮಾಡಿದ… ಆದರೆ ಲೋಹದ ಕವಚವನ್ನು ಧರಿಸಿದ್ದರಿಂದ ಯಾವುದೇ ಗಾಯಗಳಾಗಲಿಲ್ಲ. ಇಂತಹಾ ಕುತಂತ್ರವನ್ನೆಲ್ಲಾ ಮೊದಲೇ ಅರಿತಿದ್ದ ಶಿವಾಜಿ ತನ್ನ ಕೈಗಳ ಮಧ್ಯೆ ಹುಲಿ ಉಗುರನ್ನು ಜೋಡಿಸಿಕೊಂಡಿದ್ದ. ಕ್ಷಣಮಾತ್ರದಲ್ಲೇ ಅಫ್ಜಲ್ ಖಾನ್ ನ ಹೊಟ್ಟೆಯನ್ನು ಸೀಳಿಯೇ ಬಿಟ್ಟ. ಶಿವಾಜಿಯು ತನ್ನಲ್ಲಿದ್ದ ಕೊಂಬನ್ನು ಊದಿದಾದ ಮರೆಯಲ್ಲಿ ನಿಲ್ಲಿಸಿದ್ದ ತನ್ನ ಸೈನಿಕರು ಕೋಟೆಯತ್ತ ನುಗ್ಗಿದರು. ಅಫ್ಜಲ್ ಖಾನ್ ತನ್ನ ಪ್ರಾಣವನ್ನು ಬಿಟ್ಟ.. ಅವನ ಸೈನಿಕರೆಲ್ಲಾ ದಿಕ್ಕಾಪಾಲಾಗಿ ಓಡಿ ಹೋದರು… ಅಫ್ಜಲ್ ಖಾನ್ ನ ರಾಜ್ಯವು ಶಿವಾಜಿ ವಶವಾಯಿತು… ಯಾವ ಕುತಂತ್ರಕ್ಕೂ ಬಗ್ಗದ ಚಾಣಾಕ್ಷ್ಯನಾಗಿದ್ದ ಶಿವಾಜಿ…!!!
Afzal Khan-Amazing Maharashtra
ಶಿವಾಜಿಗೆ ಕೆಲವೊಂದು ವಿಷಯಗಳನ್ನು ಹೇಳಿಕೊಟ್ಟದ್ದು ಅವನ ರಾಜ್ಯದ ಒಬ್ಬ ಸಾಮಾನ್ಯ ಮಹಿಳೆ..!!! ಕೆಲವೊಂದು ರಾಜ್ಯವನ್ನು ಕೈವಶ ಮಾಡಿ ಹಿಂತಿರುಗುತ್ತಿದ್ದಾಗ ಅದಾಗಲೇ ಮಧ್ಯಾಹ್ನವಾಗಿತ್ತು.. ಶಿವಾಜಿಯು ಅಲ್ಲೇ ಹತ್ತಿರದಲ್ಲಿದ್ದ ಒಂದು ಮನೆಗೆ ಹೋಗಿ ವಿಶ್ರಾಂತಿಗಾಗಿ ವಿನಂತಿಸಿಕೊಂಡ. ಆ ಮನೆಯ ಒಡತಿ ಅದಕ್ಕೊಪ್ಪಿ ಮಧ್ಯಾಹ್ನ ಭೋಜನವನ್ನೂ ಕೊಟ್ಟಳು..  ಮೊದಲೇ ಹಸಿವಿನಲ್ಲಿದ್ದ ಶಿವಾಜಿ ಬಿಸಿ ಬಿಸಿಯಾಗಿದ್ದ ಅನ್ನದ ಮೇಲೆ ಕೈಯಿಟ್ಟ..  ಬಿಸಿ ತಡೆದುಕೊಳ್ಳಲಾರದೆ ಕಿರುಚಿಕೊಂಡ.. ಮನೆಯ ಒಡತಿ ಸೂಕ್ಷ್ಮವಾಗಿ ಒಂದು ವಿಷಯವನ್ನು ಹೇಳಿದಳು. ” ಊಟ ಮಾಡುವಾಗ ಒಂದೇ ಬಾರಿ ಕೈ ಹಾಕಬಾರದು. ಬದಿಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಊಟ ಮಾಡಬೇಕು. ಹೀಗೆ ಮಾಡಿದಾದ ತಟ್ಟೆಯಲ್ಲಿರುವ ಅನ್ನವನ್ನು ಹೆಚ್ಚು ಬಿಸಿಯೆನಿಸದೆ ಪೂರ್ಣ ಪ್ರಮಾಣದಲ್ಲಿ ಊಟವನ್ನು ಮುಗಿಸಬಹುದು.. ” ಎಂದಳು… ಅದರಂತೆ ಮುಂದೆ ಶಿವಾಜಿಯು ತನ್ನ ಸುತ್ತಮುತ್ತಲಿನ ಸಣ್ಣ ಸಣ್ಣ ರಾಜರನ್ನು ಸೋಲಿಸಿ ನಂತರ ದೊಡ್ಡ ರಾಜ್ಯಕ್ಕೆ ದಾಳಿ ಮಾಡಲು ಪ್ರಾರಂಭಿಸಿದ..

ಕೆಲವರು ಈಗಲೂ ಶಿವಾಜಿಯ ಹೆಸರೆತ್ತಿದರೆ ಸಾಕು .. ಕೋಮುವಾದವನ್ನೆ ಎಳೆದುಬಿಡುತ್ತಾರೆ.. ಆದರೆ ಶಿವಾಜಿ ಒಬ್ಬ ಜಾತ್ಯಾತೀತನಾಗಿದ್ದವ ಎಂದರೆ ಅದು ಸತ್ಯ.
ತನ್ನ ರಾಜ್ಯದ ಎಲ್ಲಾ ಪ್ರಜೆಗಳಿಗೆ ಭೇಧಭಾವ ಮಾಡುತ್ತಿರಲಿಲ್ಲ.. ತನ್ನ ಸೈನ್ಯದಲ್ಲಿ ಅನೇಕರು ಮುಸಲ್ಮಾನರಿದ್ದರು ಎನ್ನುವುದೇ ಇದಕ್ಕೆ ಸಾಕ್ಷಿ…
ಶಿವಾಜಿಯು ಬಲಿಷ್ಟ ಸೈನ್ಯವನ್ನು ಕಟ್ಟಿದ್ದನು.. ತನ್ನ ಸೈನ್ಯದ ಸಂಖ್ಯೆಯನ್ನು 2 ಸಾವಿರದಿಂದ  10 ಸಾವಿರಕ್ಕೆ ಹೆಚ್ಚಿಸಿಕೊಂಡಿದ್ದ. ಗೆರಿಲ್ಲಾ ಯುದ್ಧ ತಂತ್ರವನ್ನು ನುರಿತ ಸೈನ್ಯವಾಗಿತ್ತು. ತನ್ನ ಸೈನ್ಯದಲ್ಲಿ ಜಲಪಡೆಯು ಇತ್ತು ಎನ್ನುವುದು ವಿಶೇಷ.. ಜಲಮಾರ್ಗದ ಮೂಲಕ ಶತ್ರುಗಳ ದಾಳಿಯಾದರೆ ಎಂದು ಅತ್ಯುತ್ತಮ ಜಲ ಪಡೆಯನ್ನು ಕಟ್ಟಿ ತರಬೇತಿ ನೀಡಿದ್ದ.
ಶರಣಾಗಿ ಬಂದ ಸೈನಿಕರನ್ನು ಹಿಂಸಿಸದೆ ಗೌರವಿಸುತ್ತಿದ್ದ… ಇದರಿಂದ ಶಿವಾಜಿಯನ್ನು ಅನೇಕರು ಮೆಚ್ಚಿಕೊಂಡಿದ್ದರು… ತನ್ನ ಧರ್ಮನ್ನು ಅತೀಹೆಚ್ಚು ಗೌರವಿಸುತ್ತಿದ್ದ… ತನ್ನ ಧರ್ಮಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತಿದ್ದ…  ತನ್ನ ಧರ್ಮನ್ನು ಹೀಯಾಳಿಸಿ ಮಾತನಾಡಿದರೆ ಸ್ವಲ್ಪವೂ ಸಹಿಸಿಕೊಳ್ಳುತ್ತಿರಲಿಲ್ಲ…
ಜೊತೆಗೆ ಇತರೆ ಧರ್ಮಗಳನ್ನು ಗೌರವಿಸುತ್ತಿದ್ದ… ತನ್ನ ಧರ್ಮವನ್ನು ಒಪ್ಪಿ ಸೇರ್ಪಡೆಗೊಂಡರೆ ಅತ್ಯಂತ ಗೌರವಯುತವಾಗಿ ಸ್ವೀಕರಿಸುತ್ತಿದ್ದ ಈ ಶಿವಾಜಿ.

ಕೇವಲ ತನ್ನ ರಾಜ್ಯವನ್ನು ಮಾತ್ರವಲ್ಲದೆ ಭಾರತ ದೇಶವನ್ನೇಗೌರವಿಸುತ್ತಿದ್ದ. ಭಾರತಕ್ಕಾಗಿ ಹೋರಾಡುತ್ತಿದ್ದ…ವಿದೇಶಿಯರ ದಾಳಿಯನ್ನು ವಿರೋಧಿಸುತ್ತಿದ್ದ. ವಿದೇಶಿಯರ ದಾಳಿಯಿಂದ ಭಾರತವು ಮುಕ್ತವಾಗಬೇಕೆಂದು ಬಯಸಿದ್ದ ಈ ಶಿವಾಜಿ ಮಹಾರಾಜ. ಭಾರತವನ್ನು ಸ್ವತಂತ್ರ ಸಾಮ್ರಾಜ್ಯವನ್ನಾಗಿ ಮಾಡಬೇಕು ಎಂದುಕೊಂದಿದ್ದ.
ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಅಗ್ನೇಯ ವಾಯುವ್ಯ ಈಶಾನ್ಯ ನೈರುತ್ಯ (ಮೊಘಲ್, ನವಾಬರು, ನಿಜಾಮರು ಶಾಹಿಗಳು ಬ್ರಿಟೀಷರು ಡಚ್ಚರು ಪೊರ್ಚುಗೀಸರು ಪ್ರೆಂಚರು) ಹೀಗೆ ಭಾರತದ ಮೇಲೆ ಎಂಟುದಿಕ್ಕಿನಿಂದ ದಾಳಿಯಾಗುತ್ತಿದ್ದ  ಈ ಸಂದರ್ಭದಲ್ಲಿ ಎದ್ದು ನಿಂದ ಧೀರನೇ ಶಿವಾಜಿ. ಎಲ್ಲಾ ದಾಳಿಗಳನ್ನು ಸಮರ್ಥವಾಗಿ ಎದುರಿಸಿ ಭಾರತದ ಮೇಲಾಗುವ ಹಾನಿಗಳನ್ನು ತಪ್ಪಿಸಲು ಹಗಲಿರುಳು ಶ್ರಮಿಸಿದ ಮಹಾ ವ್ಯಕ್ತಿ.. ಒಂದರ್ಥದಲ್ಲಿ ಶಿವಾಜಿಯನ್ನೂ ಸ್ವಾತಂತ್ಯ ಹೋರಾಟಗಾರ ಎನ್ನುವುದೇ ಸರಿಯಲ್ಲವೇ??  ಪ್ರತಿನಿತ್ಯ ನಾವು ಇಂತಹಾ ವ್ಯಕ್ತಿಗಳನ್ನು ನೆನೆಸಿಕೊಂಡು ಮುನ್ನಡೆಯಬೇಕು.
ಇಂತಹ ಮಹಾ ಸಾಧಕರ, ತ್ಯಾಗಿಗಳ ದೇಶದಲ್ಲಿ ನಾವು ಹುಟ್ಟಿದ್ದೇವೆ ಎನ್ನುವುದೇ ನಮ್ಮ ಪುಣ್ಯ…

ಧನ್ಯವಾದಗಳೊಂದಿಗೆ

ಜಗತ್ ಭಟ್