Akka nanonda kanasu kande

ಕನಸು” ಹಲವರಿಗೆ ಸುಂದರ ಅನುಭವ, ಮತ್ತೆ ಕೆಲವರಿಗೆ ಭಯಾನಕಥೆಯಿಂದಿರುವಂತಹುದು. ಕನಸೆ ಹಾಗೆ ನಮ್ಮ ನಿರೀಕ್ಷೆಗೂ ಮೀರಿದ, ನಮ್ಮಲ್ಲೇ ಇರುವ, ನಮ್ಮ ಭಾವನೆಗಳು. ನಮ್ಮ ದೇಹ ನಿದ್ದೆಗೆ ಜಾರಿದಾಗ ನಮಗೆ ಚಿತ್ರಿತವಾಗುವ ಸ್ಥಿತಿ. ಪ್ರತಿದಿನ ನಮ್ಮ ಕನಸುಗಳಿಗೆ ಅರ್ಥವಿದೆ ಎಂದೆನಿಸದಿದ್ದರು ನಮ್ಮ ಸುಪ್ತ ಮನಸ್ಸಿನ ಆಳದ ಭಾವನೆಗಳನ್ನು ಕನಸಿನ ರೂಪದಲ್ಲಿ ನೀಡುವ ಶಕ್ತಿ ನಮ್ಮ ಮೆದುಳಿಗಿದೆ ಇದನ್ನು ಅಲ್ಲಗಳೆಯಲು ಕಷ್ಟಸಾಧ್ಯ.

ಇದೆಲ್ಲ ಮಲಗಿರುವ ಸ್ಥಿತಿಯ ಅನುಭವವಾದರೆ,ನಮ್ಮ ಮನಸ್ಸು ದೇಹವೆರಡು ಜಾಗೃತ ಸ್ಥಿತಿಯಲ್ಲಿ ಇರುವಾಗ ಕಾಣುವ ಕನಸು ಇದಕ್ಕೆ ಭಿನ್ನವಾದುದು.ನಿದ್ದೆಯಲ್ಲಿರುವ ಕನಸಿಗೆ ನಮ್ಮ ಸುಪ್ತ ಮನಸ್ಸು ನಿರ್ದೇಶಿಸಿದರೆ, ಇಂತಹ ಕನಸುಗಳಿಗೆ ನಾವೇ ನಿರ್ದೇಶಿಸಬೇಕು.

ಸಹಜವಾಗಿ ಮಾತನಾಡುವಾಗ ನನ್ನ ಜೀವನದ ಕನಸು ಇದು ಎಂದು ಆತ್ಮೀಯರ ಬಳಿ ಹೇಳಿಕೊಳ್ಳುತ್ತೇವೆ. ಆದರೆ ಈ ಕನಸು ನನಸು ಮಾಡುವ ನಮ್ಮ ಪ್ರಯತ್ನ ಎತ್ತಸಾಗುತಿದೆ ಅನ್ನುವುದು ನಮ್ಮನ್ನು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ. ಕಂಡ ಕನಸೆಲ್ಲ ನಿಜ ಆಗೋದಿಲ್ಲ ಬಿಡು ಅನ್ನೋ ಮಾತು ಹಲವು ಬಾರಿ ನಮ್ಮ ಕಿವಿ ಕೇಳಿರುತ್ತೆ. ಆದರೆ ಕನಸಿನ ನೆರವೇರಿಸುವಿಕೆಯ ಆಕಾಂಕ್ಷೆ ಧೃಡವಿದ್ದಾಗ ಮಾತ್ರ ಇಂತಹ ನಕಾರಾತ್ಮಕ ಮಾತು ಗೌಣ ಎನಿಸುತ್ತದೆ.ಕಾರಣವಿಷ್ಟೆ, “ಧೃಡನಿರ್ಧಾರ”.

ಬಾಲ್ಯದಲ್ಲಿ ಸಹಜವಾಗಿಯೇ, ಪೋಷಕರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮುಗಿಸಿ, ಕಾಲೇಜು ಶಿಕ್ಷಣ ಪಡೆದು, ಜೀವನ ಪ್ರವೃತ್ತಿ ಪ್ರಾರಂಭಿಸಿ, ಐಷಾರಾಮಿ ಜೀವನ ನಡೆಸೋಣ ಎಂದೆನಿಸಿರುತ್ತದೆ. ಹಲವರು ಇದರಲ್ಲಿ ಯಶಸ್ವಿಯೂ ಆಗಿರುತ್ತಾರೆ, ಆಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುತ್ತಾರೆ.ಆದರೆ ಬಹಳಷ್ಟು ಜನ ತಮ್ಮ ಜೀವನದಲ್ಲಿ ಗುರಿಯನ್ನು ತಮ್ಮವರ ಆದೇಶ ಎನ್ನುವಂತೆ ಅವರು ಹೇಳಿದಂತೆ ಮಾಡುವುದೇ ತನ್ನ ಜೀವನ ಎಂದು ನಿರ್ಧರಿಸತ್ತಾರೆ..

self actualization…ಸ್ವಯಂವಾಸ್ತವೀಕರಣ: ಜೀವನದ ಒಂದು ಘಟ್ಟದಲ್ಲಿ, ನಮಗೆ ಅನ್ನಿಸಬಹುದು, ನನ್ನ ನಿಜವಾದ ಆಸೆ ಏನು? ಎಂದು. ಒಂದು ಬಾರಿ ನಮ್ಮ ಜೀವನದಲ್ಲಿ ನಮಗೆ ಅತಿಯಾಗಿ ಕಾಡುವ ಕನಸುಗಳು ನಮ್ಮನ್ನು ನಾವೇ ಅಧ್ಯಯನ ಮಾಡುವಂತೆ ಪ್ರೇರೇಪಿಸುತ್ತೆ. ಆಗ ನಮ್ಮ ನಿಜವಾದ ಜೀವನದ ಅರಿವು, ಮುಂದೆ ಏನು ಎನ್ನುವ ಗುರಿ ನಮಗೆ ಸನ್ನಿಹಿತವಾಗುತ್ತದೆ. ಧೃಡನಿರ್ಧಾರ ಯಶಸ್ಸಿನ ಮೆಟ್ಟಿಲೇರುವಲ್ಲಿ ಪ್ರತಿಶತ 50 ರಷ್ಟು ಪಾಲು ತೆಗೆದುಕೊಳ್ಳುತ್ತದೆ..

ಜೀವನದ ಹಲವು ಘಟ್ಟಗಳಲ್ಲಿ ಇದುವು ಒಂದು.ನಮ್ಮ ದೇಹವನ್ನು ಹಲವು ಅನುಕೂಲಗಳೊಂದಿಗೆ ಒಗ್ಗಿಸಿ, ಇದೆ ಸಂತೋಷ ಎಂದು ಬೀಗುವುದರಲ್ಲಿ ಇಲ್ಲ ವಾಸ್ತವಿಕತೆ. ನಮ್ಮ ಹೆಬ್ಬಯಕೆಗಳು ನಮ್ಮನ್ನು ಕಾಡುವಾಗ ಇದು ನನ್ನ ಜೀವನದ ಸಂತೋಷದ ದಾರಿ ಎಂದು ಆರಿಸಿಕೊಳ್ಳುವ ಛಲ ನಮಗೆ ಹೊಸಜೀವನದತ್ತ ನಡೆಯುವಂತೆ ಮಾಡುವಲ್ಲಿ ವಾಸ್ತವೀಕರಣವಿರುತ್ತದೆ.

ಗುರಿ ಎಂತಹುದೋ ದಾರಿ ಎಂತಹುದು ಗುರಿಗೆ ತಕ್ಕಂತೆ ದಾರಿ ನಮ್ಮ ಜೀವನದ ಗುರಿ.ಬೆಟ್ಟದ ತುದಿಯನ್ನು ಕಂಡು ನಿಂತಲ್ಲಿಯೇ ನಿಲ್ಲದೆ, ತುದಿಮುಟ್ಟುವ ಪ್ರಯತ್ನದಲ್ಲಿ ಪರಿಶ್ರಮವನ್ನು ಹಾಕಿದಾಗ ಶಿಖರವೇರಲು ಆದೀತು.

ಪ್ರತಿ ಮನುಷ್ಯನಲ್ಲೂ ಒಂದು ಚೈತನ್ಯ ಅಡಗಿರುತ್ತದೆ, ಸ್ವಾಗತ ನೀಡದೆ ಬರುವ ಅಥಿತಿಯಲ್ಲ ಅದು. ಕರೆ ಬಂದೊಡೆ ಓಗೊಟ್ಟು ನಮಗೆ ಬೆನ್ನೆಲುಬಾಗಿ ನಿಲ್ಲುತ್ತದೆ, ಇಲ್ಲವೇ ಮಲಗುತ್ತದೆ ದೇಹಕ್ಕೆ ಜಡತ್ವ ಹಿಡಿಸಿ. ಜೀವನದ ಸಾರ್ಥಕತೆ ಎಂಬುದು ಕನಸನ್ನು ಪೂರ್ಣಗೊಳುಸುವಲ್ಲಿ ಕಾಣಿಸುತ್ತದೆ. ಮೊಗ್ಗು ತನ್ನ ಜೀವನ ಅರ್ಥಮಾಡಿಕೊಳ್ಳದ ಹೊರತು ಹೂದೋಟದ ಸೌಂದರ್ಯ ಹೆಚ್ಚದು, ಪರಿಮಳಬಾರದು. ಹೂದೋಟದಲ್ಲಿಯ ಹೂಗಳು ತಾವು ಆನಂದಿಸಿ, ನೋಡುವ ಕಣ್ಣುಗಳನ್ನು ಆಹ್ಲಾದಿಸುವಂತೆ ಮಾಡುತ್ತವೆ. ನಮ್ಮ ಜೀವನ ಇದಕ್ಕೆ ಹೊರತಲ್ಲ, ನಮ್ಮ ಸಾರ್ಥಕತೆಯಲ್ಲಿ  ನಾವು ಕಾಣುವ ಸಂತೋಷ ಕೇವಲ ನಮ್ಮದಾಗಿರದೆ ಇತರರಿಗೂ ಅದರ ಸಂತಸ ಹರಡುವಂತೆ ಮಾಡುವುದು.

ಇತ್ತೀಚೆಗೆ ಅಲೋಕ ಸಾಗರ ಅವರ ಬಗ್ಗೆ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮ ನೋಡಿದ ಮೇಲೆ ನಮಗೆ ಹೆಮ್ಮೆ ಎಂದೆನಿಸರಲು ಅಸಾಧ್ಯ. ಜೊತೆಯಲ್ಲಿ ಅಚ್ಚರಿಯು ಆಗಬಹುದು, ಜೀವನದ ಸಂತೋಷ , ಸಾರ್ಥಕತೆಗಳು ಹೀಗೂ ಇರಬಹುದೆ ಎಂದು.

ಸುಖ ಸಂತೋಷ ಎನ್ನುವುದು ಮನಸ್ಸಿನ ಸ್ಥಿತಿಗಳು.  ಆ ಸ್ಥಿತಿಯನ್ನು  ಆರೋಗ್ಯವಾಗಿ ಕಂಡುಕೊಳ್ಳುವ ಪ್ರಯತ್ನ ನಮ್ಮದಾದಾಗ ಭೂಮಿಯ ಅತೀ ಸುಖಿ ಜೀವಿಗಳಲ್ಲಿ ಒಬ್ಬರಾಗಬಹುದು.

 

-Samatha .S.P

Samatha likes to write small articles, and writing poems is her another forte. Trying new recipes and reading novels are  her other hobbies. She works for Silicon India Bengaluru.

Shopping Cart
Scroll to Top