ಬತ್ತಳಿಕೆಯಲ್ಲಿನ ಅಸ್ತ್ರಗಳು

ಏಳಿ ಎದ್ದೇಳಿ ಎನ್ನುತ್ತ ತಮ್ಮ ಜ್ಞಾನ ಮಾತ್ರದಿಂದ ದೇಶಾದ್ಯಂತದ ಯುವಕರಿಗೆ ಆದರ್ಶಪ್ರಾಯರಾಗಿರುವರು ಸ್ವಾಮಿ ವಿವೇಕಾನಂದರು.

ನೆತ್ತರು ನೀಡಿ ಸ್ವಾತಂತ್ರ್ಯ   ದೊರಕಿಸುತ್ತೇನೆ ಎಂಬ ಘೋಷ ವಾಕ್ಯದ ಹರಿಕಾರ ಸುಭಾಷ್ ಚಂದ್ರ ಬೋಸ್ ರವರು ಸ್ವಾತಂತ್ರ್ಯ  ಹೋರಾಟ ಬಿತ್ತರಿಸುವ ಪುಟಗಳಲ್ಲಿ ಅಚಾ ದವರು.

ಮೇಲಿಂದ ಬಿದ್ದ ಸೇಬು ಸಾಮಾನ್ಯವಾದ ಸಂಗತಿಯಾದರೂ ಗುರುತ್ವಾಕರ್ಷಣೆ ಎಂಬ ಭೌಗೋಳಿಕ ಕೌತುಕವನ್ನೂ ಹಾಗೂ ಅಡಗಿದ್ದ ವಿಜ್ಞಾನದ ಸೆಲೆಗಳನ್ನು ತೆರೆದಿಟ್ಟ  ಐಸಾಕ್ ನ್ಯೂಟನ್ ವಿಜ್ಞಾನ ಕಲಿಕೆಯ ತಳಹದಿಯಾಗಿರುವರು.

ಮಕ್ಕಳಾದಿಯಾಗಿ ಎಲ್ಲಾ ವಯಸ್ಸಿನವರ ಹೃದಯ ಪೀಠಾಧೀಶನಾಗಿ ಮೆರೆಯುವ ಹ್ಯಾರಿ ಪಾಟರ್ ಎಂಬ ಹುಡುಗ ಪ್ರತಿಭಾವಂತೆ ಜೆ.ಕೆ. ರೋಲಿಂಗ್‌ ಳ ಸೃಜನಾತ್ಮಕ ಚಿಂತನೆಯ ಜೀವಂತ ಪಾತ್ರ ತಮ್ಮ  ಬದುಕಿನಲ್ಲಿ ದೀಪ ನಂದಿಹೋದರೂ ಜಗತ್ತಿಗೆ ದೀವಿಗೆ ಹಿಡಿದು ನಿಂತರು. ತಮ್ಮ ಸಂಗೀತ ಸಾಧನೆಯ ಮೂಲಕ ಪುಟ್ಟ ರಾಜರು ಗವಾಯಿಗಳೆಂದೆನಿಸಿದರು.

ಮೇಲಿನ ಎಲ್ಲಾ ನಿದರ್ಶನಗಳು ಸಾಧಿಸಲು ಇರಬೇಕಾದ ಜೀವನದಲ್ಲಿನ ಮೌಲ್ಯಗಳನ್ನು  ತಿಳಿಸುತ್ತವೆ.

ನ್ಯೂಟನ್ ರಲ್ಲಿ ಇದ್ದಂತಹ ಕುತೂಹಲ ಹಾಗೂ ಪ್ರಶ್ನೆ ಮಾಡುವ ಚತುರತೆ, ದೇಶಾಭಿಮಾನ ಹಾಗೂ ಜ್ಞಾನದ ಪ್ರತೀಕರಾದ ವಿವೇಕಾನಂದರ ಸ್ಥೈರ್ಯ, ಲೌಕಿಕವಾಗಿ ಕಳೆದುಕೊಂಡ ದೃಷ್ಟಿಯನ್ನು ಆಂತರಿಕವಾಗಿ ಪ್ರಜ್ವಲಿಸುವ ಶಕ್ತಿ  ಯನ್ನಾಗಿ ಮಾಡಿಕೊಂಡ ಪುಟ್ಟರಾಜರ ಶ್ರದ್ಧೆ, ಎಡಿಸನ್ ನಲ್ಲಿನ ತಾಳ್ಮೆ, ನಮಗೆ ದೊರಕಲೇ ಬೇಕಾದುದನ್ನು  ದೊರಕಿಸಿಕೊಳ್ಳುವ ಸಾಮರ್ಥ್ಯದ ಬಗೆಗಿನ ವಿಶ್ವಾಸ ಹಾಗೂ ದೃಢ ನಿಧಾ೯ರಗಳನ್ನು ತೆಗೆದುಕೊಳ್ಳುವ ಭೋಸ್ ರ ಗುಣ. ಇವೆಲ್ಲವೂ ಯುವಕ ಯುವತಿಯರ ಬತ್ತಳಿಕೆಯ ಅಸ್ತ್ರ  ಗಳಾಗಬೇಕು.

ಯುವ ಜನಾಂಗ ದೇಶದ ಏಳಿಗೆಯ ಸಂಪೂರ್ಣ ಹೊಣೆಗಾರಿಕೆ ಮೆರೆಯುತ್ತದೆ. ತಾನು ತನ್ನ ತಾಯಿ ನಾಡು ಎಂಬ ಗೌರವ ಅಕ್ಕರೆ ಹೊಂದಿರುವ ಯುವಕ ಆ ದೇಶದ ನಿಜವಾದ ಆಸ್ತಿಯಾಗುತ್ತಾನೆ. ಸ್ವಾಭಿಮಾನ ಹಾಗೂ ಆತ್ಮವಿಶ್ವಾಸದಿಂದ ನಡೆದ ಹಾದಿ ಎಂದಿಗೂ ಸೋಲನ್ನು ನೀಡದು. ಎಲ್ಲಾ ಅಸ್ತ್ರಗಳನ್ನು ಒಳ್ಳೆಯ ತೆರವಾಗಿ ಬಳಸಿಕೊಂಡಲ್ಲಿ ಯಶಸ್ಸು ಶತ ಸಿದ್ಧ.

ಇವೆಲ್ಲವನ್ನೂ  ಮೈಗೂಡಿಸಿಕೊಂಡು ಹೋದಲ್ಲಿ ಅಸಾಧ್ಯ ವಾದುದು ಯಾವುದೂ ಇಲ್ಲ.

– ನಿವೇದಿತಾ ಬಿ ಎಸ್

Shopping Cart
Scroll to Top