ಹತ್ತೂರ ಸುತ್ತಿದರೂ ಪುತ್ತೂರ ಬಿಡೆ

ದಕ್ಷಿಣ ಕನ್ನಡ ಜಿಲ್ಲೆಯ 2ನೇಯ ಅತೀ ದೊಡ್ಡ ವಾಣಿಜ್ಯ ನಗರ ಪುತ್ತೂರು…  ಪುತ್ತೂರು ನಗರ ಸುಮಾರು 36 ಚ. ಕಿ.ಮೀ. ವಿಸ್ತೀರ್ಣವಿದೆ. ಈ ಪುತ್ತೂರು ಎಂಬ ಕ್ಷೇತ್ರದಲ್ಲಿ ಏನಿದೆ ವಿಶೇಷ ??? ಎಂದು ಕೇಳುವರು ಹೆಚ್ಚು ಜನ … ಅವರಿಗೆ ಅರಿವಿಲ್ಲದ ಕಾರಣವಿರಬಹುದು. ಪುತ್ತೂರು ಹಿಂದೆ ‘ಮುತ್ತೂರು’ ಆಗಿತ್ತು… ಹೇರಳವಾಗಿ ಮುತ್ತು ದೊರೆಯುತ್ತಿತ್ತು ಇಲ್ಲಿ.. ಕಾಲ ಕ್ರಮೇಣ ಮುತ್ತೂರು ಪುತ್ತೂರು ಆಯಿತು. ಆ ಮುತ್ತು ಸಿಗಲು ಅದಕ್ಕೊಂದು ಪೌರಾಣಿಕ ಹಿನ್ನಲೆಯಿದೆ. ಪುತ್ತೂರಿನಲ್ಲಿ ಏನಿದೆ ವಿಶೇಷ ?? ಅಲ್ಲಿದೆ ಏಷ್ಯಾದ ಅತೀ ದೊಡ್ಡ ಚಾಕಲೇಟ್ ಕಾರ್ಖಾನೆ. !!! ಅದುವೇ ‘ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ’. ದಕ್ಷಿಣ ಭಾರತ ಏಕೈಕ ಬಿಸಿ ನೀರಿನ ಕೆರೆಯಿದೆ. ಅದುವೇ ‘ ಬೆಂದ್ರ್ ತೀರ್ಥ ‘ ಇದೂ ಅಲ್ಲದೇ ಇನ್ನೇನಿದೆ… ???  ಪುತ್ತೂರಿನಲ್ಲಿದೆ ರಾಜ್ಯದ ಅತೀದೊಡ್ಡ ಆರ್ ಟಿ ಒ ಕಚೇರಿ (ವಿಸ್ತೀರ್ಣದಲ್ಲಿ). ಸುಸಜ್ಜಿತ ಬಸ್ ನಿಲ್ದಾಣವಿದೆ. ಪ್ರಸ್ತುತ ಇಂತಹಾ ಬಸ್ ನಿಲ್ದಾಣ ರಾಜ್ಯದಲ್ಲಿ ಕೇವಲ 2 ಪ್ರದೇಶದಲ್ಲಿ ಮಾತ್ರ ಇದೆ, ಅದು ಇರುವುದು ಹಾಸನ ಮತ್ತು ಮೈಸೂರು. ಶಿಕ್ಷಣದ ಗುಣಮಟ್ಟಕ್ಕೆ ಪುತ್ತೂರಿಗೆ ಪುತ್ತೂರೇ ಸರಿಸಾಟಿ. ರಾಜ್ಯದ ಮೂಲೆ ಮೂಲೆಯ ಜನ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಪುತ್ತೂರನ್ನೇ ಮೊತ್ತ ಮೊದಲು ಹೆಸರಿಸುವುದು. ಇನ್ನೇನು ಬೇಕು.!! ಸರ್ವ ಕ್ಷೇತ್ರದಲ್ಲಿ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಈ ಪುತ್ತೂರು. ರಾಜಕೀಯ ಕ್ಷೇತ್ರದಲ್ಲೂ ಪುತ್ತೂರು ತನ್ನ ಕಾರ್ಯವ್ಯಾಪ್ತಿಯನ್ನು ಹಂಚಿಕೊಂಡಿದೆ. ಪ್ರಸ್ತುತ ಕೇಂದ್ರ ಕಾನೂನು ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸದಾನಂದ ಗೌಡ ರವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು ಇದೇ ಪುತ್ತೂರಿನಲ್ಲಿಯೇ… !!! ಅವರು ಪ್ರಪ್ರಥಮ ಬಾರಿಗೆ ಸಂಸದರಾದಾಗ ಇದೇ ಮಹಾಲಿಂಗೇಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ಅವರ ಮಹಾಲಿಂಗೇಶ್ವರ ದೇವರ ಭಕ್ತಿಯನ್ನು ಸೂಚಿಸುತ್ತದೆ.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

PC: SG Datta
PC: SG Datta

ಈ ಪುತ್ತೂರು ಕ್ಷೇತ್ರವು ಇಷ್ಟೊಂದು ಪ್ರಸಿದ್ಧಿ ಪಡೆಯಲು ಪ್ರಮುಖ ಕಾರಣ ಇಲ್ಲಿಯ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ..  ಪುತ್ತೂರು ಕ್ಷೇತ್ರದಲ್ಲಿ ಯಾರೇ ಇರಬಹುದು ಕಾರ್ಯಾರಂಭಿಸುವ ಮೊದಲು ನೆನೆಯುವುದು ಮಾತ್ರ ಈ ಮಹಾಲಿಂಗೇಶ್ವರನನ್ನೇ ..!!! ದಾರಿಯಲ್ಲಿ ನಡೆದಾಡುವಾಗ ಎಡವಿದರೆ ಅಥವಾ ಇನ್ನೇನೇ ಅನಾಹುತ ಸಂಭವಿಸಿದರೂ ಬಾಯಲ್ಲಿ ಮೊದಲು ಉಚ್ಛರಿಸುವ ಪದ “ಮಹಾಲಿಂಗೇಶ್ವರ… “. ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರಿಗೆ ಸ್ಮಶಾನ ಇರುವುದು ಈ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾತ್ರ. ಈ ದೇವಾಲಯದಲ್ಲಿ ಉಳಿದ ದೇವಾಲಯಗಳಂತೆ ವರ್ಷಕ್ಕೆ ಒಂದು ಬಾರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಯು 9 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ. ಪ್ರತಿ ವರ್ಷ ಎಪ್ರಿಲ್ 10 ರಿಂದ 18 ರವರೆಗೆ ಇಲ್ಲಿ ಜಾತ್ರೆಯ ಸಂಭ್ರಮ. ಜಾತ್ರೆಯ ಪ್ರತಿನಿತ್ಯ ಪುತ್ತೂರಿನ ನಗರದ ಉದ್ದಗಲಕ್ಕೂ ಉತ್ಸವ ಮೂರ್ತಿಯು ಸವಾರಿ ಹೋಗುವುದು ಇಲ್ಲಿಯ ವಿಶೇಷ. 17 ರಂದು ಬ್ರಹ್ಮರಥೋತ್ಸವ ನಡೆಯುತ್ತದೆ . ಈ ಬ್ರಹ್ಮ ರಥವು ದಕ್ಷಿಣ ಭಾರತದಲ್ಲಿಯೇ ಅತೀ ಎತ್ತರವಾದದ್ದು. ಇದರ ಎತ್ತರ ಸುಮಾರು 72 ಅಡಿ.. !!! ಈ ಜಾತ್ರೆಯ ಅತ್ಯಾಕರ್ಷಕ ಸನ್ನಿವೇಷವೆಂದರೆ ಅದು ದೇವರ ನಗರದ ಸವಾರಿ, ದಿನಾಂಕ ಎಪ್ರಿಲ್ 16 ರಂದು ನಡೆಯುವ ಕೆರೆ ಆಯನ ಮತ್ತು ಮಲ್ಲಿಗೆ ಹಬ್ಬ .. ಈ ಮಲ್ಲಿಗೆ ಹಬ್ಬದ ಸಂದರ್ಭ ಕೇವಲ 5 ಗಂಟೆಗಳ (ಸಾಯಂಕಾಲ 5ರಿಂದ ರಾತ್ರಿ 10ರ ವರೆಗೆ) ಸಮಯದಲ್ಲಿ ಸುಮಾರು 50 ಲಕ್ಷಕ್ಕಿಂತಲೂ ಹೆಚ್ಚಿನ ಮೌಲ್ಯದ ಮಲ್ಲಿಗೆಯ ವ್ಯಾಪಾರ ವಹಿವಾಟು ನಡೆಯುತ್ತದೆ…!!! ಜಾತ್ರೆಯ ಹೆಚ್ಚಿನ ಆಕರ್ಷಣೆಯ ಕೇಂದ್ರ ಬಿಂದು ಬ್ರಹ್ಮ ರಥೋತ್ಸವ… ಇದೇ ಸಂದರ್ಭದಲ್ಲಿ ನಡೆಯುವ ಸುಡುಮದ್ದು ಪ್ರದರ್ಶನ ಅತ್ಯಂತ ಆಕರ್ಷಕ. ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರವನ್ನೇ ಸೃಷ್ಠಿಸುತ್ತದೆ. ರಥೋತ್ಸವಕ್ಕೆ ಕೊಂಚ ಮೊದಲು ಅಂದರೆ ದೇವರ ಉತ್ಸವ ಮೂರ್ತಿಯು ರಥವೇರಿದಾಕ್ಷಣ ಈ ಅತ್ಯಾಕರ್ಷಕ ಸುಡುಮದ್ದು ಪ್ರದರ್ಶನ ಪ್ರಾರಂಭವಾಗುತ್ತದೆ. ಪ್ರತಿವರ್ಷ ಸುಮಾರು ರೂ 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಪಟಾಕಿಯು ಸಿಡಿಯುತ್ತದೆ.  ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ಈ ಯಾವುದೇ ಅಡ್ಡಿ ಆತಂಕವಿಲ್ಲದೆ ಈ ಸುಡುಮಡ್ಡು ಪ್ರದರ್ಶನ ನಡೆಯುತ್ತದೆ. ಈ ಸುಡುಮದ್ದು ಪ್ರದರ್ಶನವನ್ನು ನೋಡಲೆಂದೇ ಊರವರು ಪರ ಊರವರು (ಮಡಿಕೇರಿ, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಉಡುಪಿ, ಕುಂದಾಪುರ, ಭಟ್ಕಳ) ಸೇರಿದಂತೆ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವುದು ಇಲ್ಲಿಯ ವೈಶಿಷ್ಠ್ಯ. ಅಷ್ಟೊಂದು ಆಕರ್ಷಕ ಇಲ್ಲಿಯ ಈ ಸುಡುಮದ್ದು ಪ್ರದರ್ಶನ ಮತ್ತು ಬ್ರಹ್ಮ ರಥೋತ್ಸವ . ಮಹಾಲಿಂಗೇಶ್ವರನೆಂದರೆ ಸುಡುಮದ್ದು ಪ್ರಿಯ…!!! ಸುಡುಮದ್ದು ಪ್ರದರ್ಶನನದ ನಂತರವೇ ಬ್ರಹ್ಮರಥೋತ್ಸವ ನಡೆಯುವುದು ಇಲ್ಲಿಯ ಸಂಪ್ರದಾಯ. ಈ ಸುಡುಮದ್ದು ಪ್ರದರ್ಶನವು “ಪುತ್ತೂರು ಬೆಡಿ” ಎಂದೇ ಪ್ರಸಿದ್ಧಿ.

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

PC: SG Datta
PC: SG Datta

ಪುತ್ತೂರು ಬೆಡಿ ಎಂದೊಡನೆ ಮೈ ನವಿರೇಳಿಸುತ್ತದೆ. ಸುಡುಮದ್ದು ಸಿಡಿಯುವ ಸದ್ದು ಇಡೀ ಪುತೂರಿಗೆ ಪುತ್ತೂರೇ ನಲುಗಿಸುತ್ತದೆ. ಆ ಸದ್ದಿಗೆ ನಮ್ಮ ಹೃದಯದ ಬಡಿತವೇ ಸ್ಥಬ್ಧವಾಗುತ್ತದೋ ಎನ್ನುವ ಆ ಅನುಭವ ಬಣ್ಣಿಸಲು ಸಾಧ್ಯವೇ ಇಲ್ಲ. !!! ಅದನ್ನು ಪ್ರತ್ಯಕ್ಷವಾಗಿ ಅನುಭವಿಸಿಯೇ ಅರಿತುಕೊಳ್ಳಬೇಕು. ಪುತ್ತೂರಿನಲ್ಲಿ ಹುಟ್ಟಿ ಬೆಳೆದ ವ್ಯಕ್ತಿಯೊಬ್ಬ ಯಾವುದೇ ಮೂಲೆಯಲ್ಲಿರಲಿ ಎಪ್ರಿಲ್ 17 ರಂದು ಮಾತ್ರ ಇರುವುದು ಪುತ್ತೂರಿನ ಜಾತ್ರೆಯ ಗದ್ದೆಯಲ್ಲಿ. !!! ಅಷ್ಟೊಂದು ಆಕರ್ಷಕ ಮತ್ತು ಜನಪ್ರಿಯ ಈ ಸುಡುಮದ್ದು ಪ್ರದರ್ಶನ..!!! ದೇವರ ಉತ್ಸವ ಮೂರ್ತಿಯು ತನ್ನ ಸವಾರಿಯ ಉದ್ದಗಲಕ್ಕೂ ಪಟಾಕಿ ಸಿಡಿಸಿದ ನಂತರವೇ ಮುಂದಿನ ಸಂಚಾರ..!!! ಶ್ರೀ ಮಹಾಲಿಂಗೇಶ್ವರ ದೇವರಿಗೆ ಅತ್ಯಂತ ಪ್ರಿಯವಾದ ಸಂಗತಿಯೆಂದರೆ ಅದು ಇಲ್ಲಿನ ಸುಡುಮದ್ದು ಪ್ರದರ್ಶನ… ಬೆಡಿಯೆಂದರೆ ಮಹಾಲಿಂಗೇಶ್ವರ … ಮಹಾಲಿಂಗೇಶ್ವರನೆಂದರೆ ಬೆಡಿ ಎನ್ನುವಂತಹಾ ನಂಟು ದೇವರು ಮತ್ತು ಪಟಾಕಿಯ ನಡುವೆ ಬೆಳೆದುಕೊಂಡಿದೆ. “ಹತ್ತೂರ ಸುತ್ತಿದರೂ ಪುತ್ತೂರ ಬಿಡೆ.” ಎನ್ನುವ ಮಾತು ಜಾತ್ರೆಯಲ್ಲಿ ಸೇರುವ ಲಕ್ಷಾಂತರ ಜನರೇ ಸಾಕ್ಷಿ.  ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇ ಬೇಕು ಈ ಪುತ್ತೂರು ಬೆಡಿ .. ತಪ್ಪದೇ ಪ್ರತಿವರ್ಷವೂ ನಾನು ಈ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ಅತೀವ ಸಂತುಷ್ಟಿ ಹೊಂದುತ್ತೇನೆ. ಬೆಡಿ ಪ್ರದರ್ಶನದ ನಂತರ ರಥೋತ್ಸವ ಮುಗಿದ ತಕ್ಷಣ ಎಲ್ಲರಲ್ಲೂ ಅನಿಸುವುದು ಇಷ್ಟೇ ” ಎಲ್ಲಾ ಮುಗಿಯಿತಾ ..??? ಇನ್ನೊಂದು ಬಾರಿಯ ವೀಕ್ಷಣೆಗೆ  ಇನ್ನೊಂದು ವರ್ಷ ಕಾಯಬೇಕಲ್ಲಾ.. ”

ನಾನೊಬ್ಬ ಪುತ್ತೂರಿನವನೆಂದು ಹೆಮ್ಮೆ ಪಟ್ಟುಕೊಳ್ಳಲು ಇಷ್ಟು ಸಾಕಲ್ಲವೇ…!!!

– Jagath Bhat[/fusion_builder_column][/fusion_builder_row][/fusion_builder_container]

Shopping Cart
Scroll to Top