“ನಾನು ಇವತ್ತು MG Road ಗೆ ಹೋಗುವೆ… ” ಎಂದು ಹೇಳಿದಾಕ್ಷಣ ಮನೆಯಲ್ಲಿರುವ ಹಿರಿಯ ವ್ಯಕ್ತಿ .. “ಅಯ್ಯಯ್ಯೋ … ಯಾಕಪ್ಪಾ?? ಏನು ಬೇಕಿತ್ತು??? ಅಲ್ಲೇನಿದೆ ಅಂತದ್ದು ಬೇರೆಲ್ಲಯೂ ಸಿಗದೇ ಇದ್ದದ್ದು….!!!” ಎಂದರು. ಇವರಿಗೆ ಹೇಗಪ್ಪಾ ವಿವರಿಸಿ ಹೇಳೋದು ಎನ್ನುವ confusion start.
MG Road ಗೆ ಹೋಗೋದು ಎಂದರೆ ಅವರ ಪ್ರಕಾರ ಅದು ಪೋಲಿಗಳ ಅಡ್ಡ, Hi-Fi ಜನಗಳು shopping ಮಾಡಲು ಹೀಗೆ ಇನ್ನೂ ಏನೇನೋ ಅಭಿಪ್ರಾಯಗಳು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮೋಜು ಮಸ್ತಿ ಮಾಡಲು ಎನ್ನುವುದಿದೆ.. ಹಾಗಿದ್ದರೆ MG Road ನಲ್ಲಿ ಇರುವುದಾದರು ಏನು? ಎನ್ನುವ ಪ್ರಶ್ನೆ ಮೂಡದೆ ಇರಲಾರದು…
ಅಲ್ಲಿ ಪಬ್ ರೆಸ್ಟೋರಂಟ್ ದೊಡ್ಡ ದೊಡ್ಡ ಮಾಲ್ ಗಳು ಇವೆ.. MG Road ನ ಪಕ್ಕದಲ್ಲೇ ಇನ್ನೊಂದು ರಸ್ತೆ ಇದೆ. ಅದರ ಹೆಸರು Brigade Road. ಆದಕ್ಕೂ ಇದೇ ರೀತಿಯ ಅಭಿಪ್ರಾಯ ಇದೆ. ಅದಕ್ಕೂ ಕಾರಣ ಇದೆ. ಅಲ್ಲಿ ನಡೆಯುವುದು ಅದೇ .. ವಿದೇಶಿಯರು, ಹೊರರಾಜ್ಯದ ಕೆಲವರು ಅದರೊಂದಿಗೆ ನಮ್ಮ ಕೆಲವು ಪುಂಡುಪೋಕರು ಅಲ್ಲಿರುವ ಪಬ್ ರೆಸ್ಟೋರಂಟ್ ಗಳಿಗೆ ಹೋಗುವುದು ಮತ್ತು ಅಸಭ್ಯ ವರ್ತನೆಗಳ ಮೋಜಿಗಾಗಿ, ಗೆಳೆಯ ಅಥವಾ ಗೆಳತಿಯೊಂದಿಗೆ road ಸುತ್ತುವುದು… ಅಥವಾ ಭರ್ಜರಿ shopping ಗಾಗಿ ಎನ್ನುವ ಕೆಟ್ಟ ಅಭಿಪ್ರಾಯ ಇದೆ. MG Road ಎನ್ನುವುದು ನೆನಪಾಗುವುದು ವರ್ಷದ ಅಂತ್ಯದ ದಿನಕ್ಕೆ ಮಾತ್ರ. ಆದರೆ ಅಂದು ಅಲ್ಲಿಗೆ ಹೊರಟವನ ದೃಷ್ಠಿಕೋನವೇ ಬೇರೆಯದ್ದೇ ಆಗಿತ್ತು. ಉದ್ದೇಶ ಒಳ್ಳೆಯದಾಗಿತ್ತು..
ಇದೀಗ MG Road ಎಂದರೆ ಅದು ಇದು ಎನ್ನುವ ಕೆಟ್ಟ ಅಭಿಪ್ರಾಯಗಳೆಲ್ಲಾ ದೂರ ಸರಿಯುವ ಕಾಲ ಸನ್ನಿಹಿತವಾಗಿದೆ… ಎಂದಾಗ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜವೇ… ಉತ್ತರ ಇಲ್ಲಿದೆ ನೋಡಿ…
ಕೆಲವೊಂದು ಹುಡುಗರು ಮತ್ತು ಹುಡುಗಿಯರು ಸೇರಿ MG Road ಗಿರುವ ಅಂಟಿಕೊಂಡಿರುವ ಕಳಂಕವನ್ನು ದೂರ ಸರಿಸಲು ಪ್ರಯತ್ನ ಪಡುತ್ತಿದ್ದಾರೆ.. ಕೇವಲ ಮೋಜು ಮಸ್ತಿಗೆ ಮತ್ತು ಐಶಾರಾಮಿ ಜನರಿಗೆ ಮಾತ್ರ ಸೀಮಿತವಾಗಿದ್ದ MG Road ನಲ್ಲಿ ಇದೀಗ ಕನ್ನಡ ಮಾತನಾಡಲು ಕಲಿಯುವ ಅವಕಾಶ ಒದಗಿಬಂದಿದೆ… ಕೆಲವರಂತೂ “ಹೌದಾ…” ಎಂದು ಹುಬ್ಬೇರಿಸುವುದರಲ್ಲಿ ಸಂಶಯವಿಲ್ಲ… ಹೊರರಾಜ್ಯದಿಂದ ಬಂದು ಇಲ್ಲಿ ಕಾರ್ಯ ನಿರ್ವಹಿಸುವವರು ಅಂದರೆ ಕನ್ನಡೇತರರಿಗೆ ಕನ್ನಡ ಮಾತನಾಡಲು ಕಲಿಯುವ ಸುವರ್ಣಾವಕಾಶ ಲಭಿಸಿದೆ.
ಇಷ್ಟೆಲ್ಲಾ ಹೇಳಿದ ಮೇಲೆ ಕನ್ನಡ ಕಲಿಸುವವರು ಯಾರು ಎನ್ನುವ ಮತ್ತೊಂದು ಪ್ರಶ್ನೆ ಮೂಡುತ್ತದೆ… ಇನ್ಯಾರೂ ಅಲ್ಲ … ಅವರೇ www.kannadagottilla.com ನ ತಂಡದ ಸದಸ್ಯರು. ಇಂತಹಾ ಅವಕಾಶ ಇನ್ನೆಲ್ಲಿಯೂ ಸಿಗಲಾರದು… ಅತ್ಯಂತ ಸರಳವಾಗಿ ಇಲ್ಲಿ ನೇರವಾಗಿ ಕನ್ನಡ ಭಾಷೆಯನ್ನು ಹೇಳಿಕೊಡಲಾಗುವುದು..
(MG Road ಗೆ ಹೋಗುವೆ ಎಂದು ಹೊರಟವನ್ಯಾರು ಎಂದರೆ ಈ ತಂಡದ ಸದಸ್ಯಲ್ಲೊಬ್ಬ)
ಬನ್ನಿ ಭಾಗವಹಿಸಿ ಕನ್ನಡ ಸಂಜೆಯಲ್ಲಿ ಮತ್ತು ಕನ್ನಡ ಕಲಿಯಿರಿ…
ಕನ್ನಡ ಕಲಿಯಲು
ಅಂಜಿಕೆಯೇ?
ನಾಚಿಕೆಯೇ ?
ನನಗ್ಯಾಕೆ ಎನ್ನುವ ಗರ್ವವೇ?
ಅದೇನೇ ಇರಲಿ
ಎಲ್ಲವನ್ನು ಬದಿಗಿಟ್ಟು ಬನ್ನಿ ನಾವು ಹೇಳಿಕೊಡುತ್ತೇವೆ ಎನ್ನುತ್ತಾರೆ ಈ ತಂಡದ ಸದಸ್ಯರು.
ಪ್ರತಿ ತಿಂಗಳಿನ ಮೊದಲ ಭಾನುವಾರ ಸಂಜೆ 4.00 ಕ್ಕೆ
ಸ್ಥಳ : Rangoli, The Metro Art Center, Next to Metro station MG Road, Bengaluru.
[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]
[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]
[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]
– Jagath Bhat
[/fusion_builder_column][/fusion_builder_row][/fusion_builder_container]