ಬತ್ತಳಿಕೆಯಲ್ಲಿನ ಅಸ್ತ್ರಗಳು

ಏಳಿ ಎದ್ದೇಳಿ ಎನ್ನುತ್ತ ತಮ್ಮ ಜ್ಞಾನ ಮಾತ್ರದಿಂದ ದೇಶಾದ್ಯಂತದ ಯುವಕರಿಗೆ ಆದರ್ಶಪ್ರಾಯರಾಗಿರುವರು ಸ್ವಾಮಿ ವಿವೇಕಾನಂದರು. ನೆತ್ತರು ನೀಡಿ ಸ್ವಾತಂತ್ರ್ಯ   ದೊರಕಿಸುತ್ತೇನೆ ಎಂಬ ಘೋಷ ವಾಕ್ಯದ ಹರಿಕಾರ ಸುಭಾಷ್ ಚಂದ್ರ ಬೋಸ್ ರವರು ಸ್ವಾತಂತ್ರ್ಯ  ಹೋರಾಟ ಬಿತ್ತರಿಸುವ ಪುಟಗಳಲ್ಲಿ ಅಚಾ ದವರು. ಮೇಲಿಂದ ಬಿದ್ದ ಸೇಬು ಸಾಮಾನ್ಯವಾದ ಸಂಗತಿಯಾದರೂ ಗುರುತ್ವಾಕರ್ಷಣೆ ಎಂಬ ಭೌಗೋಳಿಕ ಕೌತುಕವನ್ನೂ ಹಾಗೂ ಅಡಗಿದ್ದ ವಿಜ್ಞಾನದ ಸೆಲೆಗಳನ್ನು ತೆರೆದಿಟ್ಟ  ಐಸಾಕ್ ನ್ಯೂಟನ್ ವಿಜ್ಞಾನ ಕಲಿಕೆಯ ತಳಹದಿಯಾಗಿರುವರು. ಮಕ್ಕಳಾದಿಯಾಗಿ ಎಲ್ಲಾ ವಯಸ್ಸಿನವರ ಹೃದಯ ಪೀಠಾಧೀಶನಾಗಿ ಮೆರೆಯುವ ಹ್ಯಾರಿ [...]