MYಸೂರು.. ನನ್ನ ತವರೂರು
ಹುಟ್ಟೂರು, ಮೈಸೂರು. ಹುಟ್ಟಿ, ಬೆಳೆದು, ಓದಿ, ಒಟ್ಟೂ ಇಪ್ಪತ್ತೆರಡು ವರ್ಷಗಳ ತವರೂರ ನಂಟು ಎಂಬ ಭದ್ರ ಬುನಾದಿಯ ಮೇಲೆ ನಿಂತ ಸಂಬಂಧವಿದು. ನಾಲ್ಕು ವರ್ಷಗಳ ಹಿಂದೆ ನೌಕರಿಯ ನಿಮಿತ್ತ ಬೆಂಗಳೂರಿಗೆ ವಲಸೆ ಬಂದರೂ, ಎಲ್ಲ ಮೈಸೂರಿಗರಂತೆ ‘ನನ್ನಷ್ಟು ಮೈಸೂರನ್ನು ಪ್ರೀತಿಸುವವರೇ ಇಲ್ಲ’ವೆಂಬ ಭ್ರಮೆಯ ಮುಗ್ಧ ಮದ. ಕೆಲವು ತಿಂಗಳ ಹಿಂದಷ್ಟೇ ನಾವು ಮೈಸೂರಿನಲ್ಲಿ ವಾಸವಿದ್ದ ಮನೆಯನ್ನು ತೊರೆದು ಬರುವಾಗ ಎಂಥದೋ ಅನಾಥಭಾವ ಆವರಿಸಿ ಮನಸ್ಸು ಮ್ಲಾನಗೊಂಡಿತ್ತು. ಎಲ್ಲಿ ಹೋದರೂ ಇರುವುದೊಂದೇ ಭೂಮಿ ಎಂದು ಮಾನವ ಜಗತ್ತಿನ ತಾರತಮ್ಯಗಳನ್ನು …